ಕಾಂತಾರ ಚಾಪ್ಟರ್ 1..
ಹಲವು ವರ್ಷಗಳ ಶ್ರಮ, ಶ್ರಮಕ್ಕೆ ತಕ್ಕ ಪ್ರತಿಫಲ. ಪದಗಳಿಗೆ ಸಿಲುಕದ, ನಿಲುಕದ, ದಕ್ಕದ ಸಿನಿಮಾ ಕಾಂತಾರ. ಕಾಂತಾರ ಸಿನಿಮಾ ವನ್ನ ವರ್ಣಿಸಲಸಾಧ್ಯ, ಅದನ್ನ ನೋಡಿಯೆ ಅನುಭವಿಸಬೇಕು. ಪದಗಳಿಗೆ ದಕ್ಕುವುದಲ್ಲ ಇದು, ಅನುಭವಕ್ಕೆ ದಕ್ಕುವ ಸಿನಿಮಾ.
ಇದು ಕೇವಲ ಸಿನಿಮಾ ಮಾತ್ರ ಅಲ್ಲ, ಈ ನೆಲದ ದರ್ಶನ. ದೈವದ ದರ್ಶನ.
ಶ್ರಮಜೀವಿ ರಿಷಬ್ ಅಣ್ಣನ ಪರಿಶ್ರಮದ ಪ್ರತೀಕವೇ ಈ ಸಿನಿಮಾ. ಕ್ರಿಯಾಶೀಲ ವ್ಯಕ್ತಿಗಳೆಲ್ಲ ಒಂದು ಕಡೆ ಸೇರಿದರೆ ಈ ತರದ ಸಿನಿಮಾ ಆಚೆ ಬರಲು ಸಾಧ್ಯ.
ರಿಷಬಣ್ಣನ ಅಭಿನಯ ನೋಡಿ ಬೆರಗಾದವರು ಅದೆಷ್ಟೋ, ಅವರನ್ನು ಪರದೆಯ ಮೇಲೆ ನೋಡಿದರಂತೂ ಗಟ್ಟಿಯಾಗಿ ಅಪ್ಪಿಕೊಳ್ಳುವಷ್ಟು ಹತ್ತಿರವಾಗುತ್ತಾರೆ.
ಅರವಿಂದ್ ಕಶಪ್ ಅವರ ಸಿನಿಮಾ ಆಟೋಗ್ರಾಫಿ ಒಂದು ಹೊಸ ಅಧ್ಯಾಯದ ಆರಂಭ. ಅರವಿಂದಣ್ಣ ನಮ್ಮ ನೆಲದ ಆಸ್ತಿ, ಹಾಗೂ ಪ್ರತಿ ಸಿನಿಮಾದ ವ್ಯಕ್ತಿಗಳಿಗೆ ಅವರೊಬ್ಬ ಟೆಕ್ಸ್ಟ್.
ಅಜಿನೀಸ್ ಲೋಕನಾಥ್ ಸರ್ ಅಂತು ಸಂಗೀತದ ರಸದೌತಣವನ್ನು ನೀಡಿದ್ದಾರೆ.
ಪ್ರತಿ ಪಾತ್ರಗಳು ಹೃದಯದ ಆಳಕ್ಕೆ ಇಳಿಯುತ್ತವೆ.
ಪ್ರಗತಿ ಅಕ್ಕನ ವಸ್ತ್ರ ವಿನ್ಯಾಸ ಮತ್ತಷ್ಟು ಮೆರಗು ಕೊಡುತ್ತದೆ. ಪ್ರಗತಿ ಅಕ್ಕ ಅಣ್ಣನ ಒಂದು ಶಕ್ತಿ ಮತ್ತು ಈ ಸಿನಿಮಾದ ಶಕ್ತಿ. ಥ್ಯಾಂಕ್ಯೂ ಅಕ್ಕ.
ಬರಹಗಾರರ ಪ್ರತಿ ಮಾತು ಎದೆಯಾಳಕ್ಕೆ ಇಳಿಯುತ್ತವೆ.
ಹೊಂಬಾಳೆ ಸಂಸ್ಥೆಯ ಪ್ರತಿ ಹೆಜ್ಜೆಯು ಒಂದು ಹೊಸತನ ಮತ್ತು ಕ್ರಿಯಾಶೀಲ ಮತ್ತು ನಮ್ಮ ನೆಲದ ಸಂಸ್ಕೃತಿಯತ್ತ ಇಡುತ್ತಿರುವುದು ಹೆಮ್ಮೆಯ ವಿಷಯ.
ಸಾಹಸ ನಿರ್ದೇಶಕರ ಕೆಲಸವಂತೂ ನಿಜಕ್ಕೂ ಸಾಹಸವೆನಿಸುತ್ತದೆ.
ಈ ಸಿನಿಮಾದಲ್ಲಿ ಒಂದು ಭಾಗವಾಗಿದ್ದಕ್ಕೆ ಹೆಮ್ಮೆ ಇದೆ. ರಿಷಬಣ್ಣನ ಜೊತೆಗಿನ ಪಯಣ ಅವರನ್ನು ನೋಡಿ ಕಲಿತ ವಿಷಯಗಳು ಹಲವು. ರಿಷಬಣ್ಣ ನಮಗೊಂದು ವಿಶ್ವವಿದ್ಯಾಲಯ ಆ ವಿಶ್ವವಿದ್ಯಾಲಯದಲ್ಲಿ ನಾನೊಬ್ಬ ವಿದ್ಯಾರ್ಥಿ, ಮುಂದೆ ಏನಾದರೂ ದೊಡ್ಡದಾಗಿ ಸಾಧಿಸಿದರೆ ಅದು ಅವರು ಕೊಡುಗೆಯ ಹೊರತು ನಮ್ಮದಲ್ಲ. ಇನ್ನು ಏನು ಹೇಳುವ ಹೇಳಲಾರದಷ್ಟು ಕಾಂತಾರದ ಗುಂಗಲ್ಲೇ ಕಾಲ ಕಳೆಯುತ್ತಿದ್ದೇನೆ.ನನಗೆ ಅಣ್ಣ ಅಂದರೇ ಪ್ರೀತಿ. ಲವ್ ಯು ರಿಷಬಣ್ಣ, ಲವ್ ಯು ಕಾಂತಾರ, ಜೈ ಹೊಂಬಾಳೆ.
@rishabshettyofficial@anirudh.mahesh@m_salmaann@hombalefilms@arvindskash@pragathirishabshetty #kanthara #kantarachapter1onoct2 #KantaraChapter1onOct2 #hombalefilms #rishabshetty #pragathishetty
ಸಿನಿಮಾ,ಸಿನಿಮಾ,ಸಿನಿಮಾ ಯಾವಗಲೂ ಸಿನಿಮಾ ಬಗ್ಗೆ ಮಾತು,ಸಿನಿಮಾ ಹೇಗೆ ಇರಬೇಕು,ಹೇಗೆ ಮಾಡಬೇಕು,ಜನಕ್ಕೆ ಎಂತಹ ಸಿನಿಮಾ ಕೊಡಬೇಕು ಅಂತ ಯಾವಗಲೂ ಸಿನಿಮಾ ಯೋಚನೆ ಮಾಡುವ ಚರಣ್ ಸರ್ ಗೆ ಹುಟ್ಟು ಹಬ್ಬದ ಶುಭಾಶಯಗಳು....,🎂💐❤💙💐🎂 ಸಿನಿಮಾ ಕನಸುಗಾರನ ಸಿನಿಮಾ ಯಾನ ನಿರಂತರವಾಗಿ ಸಾಗುತ್ತಲೆ ಇರಲಿ ಎಂದು ಆಶೀಸುತ್ತೀನಿ.....God bless you Charan sir..
@charan_yavira_
ಚಿಕ್ಕಬಳ್ಳಾಪುರ ನೆಲದಲ್ಲಿ ಸಾಂಸ್ಕೃತಿಕ ನೀರು ಹರಸಿ ರಂಗ ಕೃಷಿಕನಾಗಿ ಹಲವು ವರ್ಷಗಳಿಂದ ರಂಗಕಾಯಕ ಮಾಡುತ್ತಿರುವ ರಂಗ ಸ್ನೇಹಿತ ದಿಲಿಪ್..ಚಿಕ್ಕಬಳ್ಳಾಪುರ ಗಡಿ ಜಿಲ್ಲೆ,ಅಲ್ಲಿ ರಂಗ ಚಟುವಟಿಕೆ ಕಡಿಯಾಗುವ ಕಾಲಗಟ್ಟದಲ್ಲಿ, ದಿಲಿಪ್ ತನ್ನ ಊರಿನಲ್ಲೆ ನೆಲೆ ನಿಂತು ಮಕ್ಕಳ ಬೇಸಿಗೆ ಶಿಬಿರ,ಕಾಲೇಜು ಮಕ್ಕಳ ನಾಟಕೊತ್ಸವ,ಹೀಗೆ ಬೇರೆ ಬೇರೆ ರಂಗ ಚಟುವಟಿಕೆ ಮೂಲಕ ಚಿಕ್ಕಬಳ್ಳಾಪುರಕ್ಕೆ ಸಾಂಸ್ಕೃತಿಕವಾಗಿ ತನ್ನ ನೆಲದಲ್ಲಿ ಏನಾರ ಒಂದು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಲೇ ಇರುತ್ತಾನೆ.ನಿನ್ನೆ ನಡೆದ ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಭಾಗವಹಿಸಿ,ಮಕ್ಕಳ ನಾಟಕಗಳನ್ನ ಕಣ್ಣುತುಂಬಿಕೊಂಡೆ.. ಸರಕಾರಗಳು ಪ್ರಾಮಾಣಿಕವಾಗಿ ಕೆಲಸ ಮಾಡುವ ವ್ಯಕ್ತಿಗಳನ್ನ ಗುರುತಿಸುವ ಕೆಲಸ ವಾಗಲಿ..
#childrenworkshop #theater #trendingnow #chikkaballapur @_your_dilipkumar97 #trend
ನಿನ್ನೆ ನಡೆದ ಕಲಬುರ್ಗಿ ರಂಗಾಯಣದ ಬೇಸಿಗೆ ಶಿಬಿರದ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭಾಶಯಗಳನ್ನ ಕೋರಿದೆ..
ಈ ಸಂಧರ್ಭದಲ್ಲಿ ಸಚಿವರಾದ ಶ್ರೀ ಶರಣ ಪ್ರಕಾಶ ಪಾಟೀಲ್ ಸರ್ ,ಎಮ್ ಎಲ್ ಎ ಅಲ್ಲಮ ಪ್ರಭು ಸರ್ ,ನಿರ್ದೇಶಕರಾದ ಸುಜಾತ ಜಂಗಮಶೆಟ್ಟಿ,ಸಹಾಯಕ ನಿರ್ದೇಶಕರಾದ ಸಿದ್ರಾಮ್ ಶಿಂದೆ ಸರ್ ಹಾಜರಿದ್ದರು..
.
.
#theater #workshop #treding #trendingnow #kalaburgi
ಕನ್ನಡದ ಪ್ರತಿ ಮನಸ್ಸುಗಳಿಗೂ ನಮಸ್ಕಾರ...ಡಾ.ರಾಜಕುಮಾರ್ ಸರ್ ಅವರ ಬಗ್ಗೆ ಚರ್ಚೆಯಾಗಬೇಕಾದ ವಿಷಯಗಳು ಬೇರೆ,ಆದರೆ ದುರತವೆಂದರೆ ಈಗ ಚರ್ಚಿಸುತ್ತಿರುವ ವಿಷಯವೇ ಬೇರೆ.ಅದು ಅನಗತ್ಯ ,ಆದರೆ ಈಗ ನಾವುಗಳು ಚರ್ಚೆಯ ವಿಷಯದ ದಿಕ್ಕನ್ನ ಬದಲಿಸುವ..ಜೈ ಕರ್ನಾಟಕ, ಜೈ ಭುವನೇಶ್ವರಿ. ಜೈ ಅಣ್ಣವರು.
#drrajkumar #trend #karnataka #drshivarajkumar
@nimmashivarajkumar@puneethrajkumar.official
ನಿನ್ನೆ ನಡೆದ ಮೈಸೂರಿನ ರಂಗಾಯಣದಲ್ಲಿ ಚಿಣ್ಣರ ಮೇಳದ ನಾಟಕೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೆಲ ಅನಿಸಿಕೆಗಳನ್ನ ಹಂಚಿಕೊಂಡೆ.. ನನ್ನ ಕರೆಸಿದ ರಂಗಾಯಣ ನಿರ್ದೇಶಕರಾದ ಸತೀಶ್ ತಿಪಟೂರು ಅವರಿಗೆ ವ್ಯಯಕ್ತಿಕ ಧನ್ಯವಾದಗಳು🙏💙🙏
#trend #childrenworkshop #mysure #trendingreels #karnataka
ಶಿವಮೊಗ್ಗ ರಂಗಾಯಣದ ಚಿಣ್ಣರ ಸಿಹಿಮೊಗೆ ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮಾರೋಪ ನುಡಿಗಳನ್ನಾಡಿ ಅಭಿನಂದಿಸಿದೆ... ರಂಗಾಯಣದ ಮಕ್ಕಳ ಬೇಸಿಗೆ ಶಿಬಿರ ಯಶಸ್ವಿಯಾಗಿ ನೆರವೇರಿದೆ.
.
.
.
#trend #karnataka #sandalwood #trendingreels #newreels